Kampu

ಎಂದಿನಂತೆ ಮಲ್ಲಿಗೆ ಕನ್ನಡ ಸಂಘದ ಯುಗಾದಿ ೨೦೧೫ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳೊಡನೆ ಸಜ್ಜಾಗಿತ್ತು.

ಸಂಘದ ಖಜಾಂಚಿಯಾದ ಶ್ರೀಮತಿ ಸವಿತಾ ಪ್ರದೀಪ್ ಅವರು ಕಾರ್ಯಕ್ರಮಕ್ಕೆ ಸ್ವಾಗತವನ್ನು ಬಯಸಿದರು. ಡಲ್ಲಾಸ್ ನಗರಕ್ಕೆ ಹೊಸ ಪರಿಚಯ, ಹೊಸ ಮುಖ ಹಾಗು ನೂತನ ಸದಸ್ಯರಲ್ಲಿ ಒಬ್ಬರಾದ ಸುಮಾನಸ ರಂಜನಿ ಅವರ ಸೃಶ್ರಾವ್ಯ ಗಾಯನದೊಂದಿಗೆ ಕಾರ್ಯಕ್ರಮದ ಆರಂಭ. ಶ್ರೀಮತಿ ರಮ್ಯ ಅಶೋಕ್ ಅವರು ಚಿಣ್ಣರನ್ನು ಅಚ್ಚು ಕಟ್ಟಾಗಿ ಆದರದ ಸ್ವಾಗತವ ನೀಡುವೆವು ನಾವು ನೃತ್ಯಕ್ಕೆ ತರಬೇತಿ ಕೊಟ್ಟು ತಂದಿದ್ದರು. ನಂತರ ಶಿಲ್ಪಿ ಸದಾಶಿವಯ್ಯ ಹಾಗು ಕೋಮಲ್ ಪಾಟಿಲ್ ರವರು ನಿರ್ದೇಶಿಸಿದ್ದ ಓಂ ಗಣೇಶ, ಶಾರದ ನಾಗರಾಜ್ ನಿರ್ದೇಶಿಸಿದ್ದ ಬೊಂಬಾಟ್ ಪುಟಾಣಿಗಳು ಮಕ್ಕಳನ್ನು ಹಾಗು ಸದಸ್ಯರನ್ನು ರಂಜಿಸುವಲ್ಲಿ ಯಶಸ್ವಿಯಾದವು. ಅರಳು ಮಲ್ಲಿಗೆ ಶಾಲೆಯ ಮಕ್ಕಳು ಅಪ್ಪಟ ಕನ್ನಡದಲ್ಲಿ ನೃತ್ಯ ರೂಪಕವನ್ನು ಶ್ರೀಮತಿ ಲಲಿತ ಪ್ರಸಾದ್, ಶ್ರೀಮತಿ ಸವಿತಾ ವಿಟ್ಟಲ್ ಹಾಗು ಪೂರ್ಣಿಮಾ ಸುಬ್ರಮಣ್ಯ ಅವರ ಮಾರ್ಗದರ್ಶನದಲ್ಲಿ ಪ್ರದರ್ಶಿಸಿದರು. ಎಂದಿನಂತೆ ಶ್ರೀಮತಿ ವೀಣಾ ಜನಕ್ ಚಿಣ್ನರನ್ನೆಲ್ಲ ಒಟ್ಟುಗೂಡಿಸಿ ಬಣ್ಣ ಬಣ್ಣದ ಧಿರುಸು ತೊಡಿಸಿ ವಿವಿಧತೆಯಲ್ಲಿ ಏಕತೆ ಎನ್ನುವ ನೃತ್ಯ ರೂಪಕವನ್ನು ಮಂಡಿಸಿದರು. ಕೊಡವ ಶೈಲಿಯಲ್ಲಿ ಸೀರೆಯುಟ್ಟು ಹೆಜ್ಜೆ ಹಾಕಿದ ಪುಟ್ಟ ಪುಟ್ಟ ಮಕ್ಕಳು ಅಂದವಾಗಿ ಕಂಡು ಬಂದರು. ಜಯ ಕರ್ನಾಟಕ ಮಾತೆ ನೃತ್ಯ ನಿರ್ದೇಶನ ಮಾಡಿದ್ದವರು ಶ್ರೀಮತಿ ಸಪ್ನಾ ಗಣೇಶನ್,ಅಪ್ಪಟ ಶಾಸ್ತ್ರೀಯ ನೃತ್ಯದ ಪಟ್ಟುಗಳು ಹಾಗು ಹೆಜ್ಜೆಗಳನ್ನು ತಮ್ಮ ನೃತ್ಯ ರೂಪಕದಲ್ಲಿ ಅಳವಡಿಸಿ ಕೊಂಡಿದ್ದು ಹಾಗು ಮಕ್ಕಳು ಅದನ್ನು ಅಚ್ಚು ಕಟ್ಟಾಗಿ ಪ್ರದರ್ಶಿಸಿದ್ದು ಪ್ರಶಂಸನೀಯ. ಸ್ತಳೀಯ ದೇವಸ್ತಾನಗಳಲ್ಲಿ ಒಂದಾದ ಕಾರ್ಯ ಸಿದ್ದಿ ಹನುಮಾನ್ ದೇವಸ್ಥಾನದ ಅಂಗವಾದ ಬಾಲ ದತ್ತ ಕನ್ನಡ ಶಾಲೆಯ ಮಕ್ಕಳು ಶ್ರೀಮತಿ ಚೈತ್ರ ಶ್ರೀಧರ್ ಹಾಗು ಶ್ರೀಮತಿ ದೇವಿ ಹಿಪ್ಪರಗಿ ಅವರ ಅವರ ಮಾರ್ಗದರ್ಶನದಲ್ಲಿ ಪ್ರದರ್ಶಿಸಿದ ರಂಗೀಲ ವರ್ಣರಂಜಿತ ವಾಗಿತ್ತು ಹಾಗು ಕನ್ನಡ ಚಲನಚಿತ್ರ ಹಾಗು ಚಿತ್ರ ಸಂಗೀತ ಬೆಳೆದು ಬಂದ ಗತಿಯನ್ನು ತೋರಿಸುವಲ್ಲಿ ಯಶಸ್ವಿಯಾಯಿತು. ಡಾನ್ಸ್ ಅ ಕ್ಷರಿ ಅತ್ಯತ್ತಮ ಪ್ರಯೋಗ. ಕೆಲವು ನೃತ್ಯದ ಝಲಕ್ನ್ನ ಒಟ್ಟಿಗೆ ಸೇರಿಸಿ ಮಕ್ಕಳು ಸಹನಾ ಸುನಿಲ್ ಅವರ ನೇತೃತ್ವದಲ್ಲಿ ಪ್ರದರ್ಶಿಸಿದರು. ಮಕ್ಕಳೇ ನಿರ್ಮಿಸಿ ನಿರ್ದೇಶಿಸಿದ್ದ ಇನ್ನೊಂದು ಕಾರ್ಯಕ್ರಮ ಜೀನಾ ಯಹಾನ್ ಹಿಂದಿಯ ಶೀರ್ಷಿಕೆ ಯಾಕೆ ಎನ್ನುವ ಸಂದೇಹವೆನಾದರು ನಿಮಗೆ ಬಂದರೆ ಅದು ಸಹಜ. ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆಯಾಗಿ ಸ್ವೀಕರಿಸಿ ೫೦ ವರ್ಷಗಳಾದ ಕಾರಣವಿರಬಹುದು. ಏನೆ ಇರಲಿ ಅಕಾಂಕ್ಷ ಆದ್ಯ ನಡೆಸಿಕೊಟ್ಟ ಕಾರ್ಯಕ್ರಮ ಚೆನ್ನಾಗಿ ಮೂಡಿ ಬಂತು.

ಜನಪದ ಸೊಗಡು ಹಾಗು ಕಲೆ ಈಗ ಮಾಯವಾಗುತ್ತಾ ಇದೆ. ಅದರ ಎಷ್ಟೋ ಪ್ರಾಕಾರಗಳು ಜನರಿಗೆ ತಿಳಿದಿರುವುದಿಲ್ಲ. . ಜಾನಪದ ಕಲೆಗಳಲ್ಲಿ ಒಂದಾದ ಕಂಸಾಳೆ ನೃತ್ಯವನ್ನು ಶಾಸ್ತ್ರೀಯವಾಗಿ ಕಲಿತಿರುವ ಸಹನಾ ಹಂದೆ ವಿಶೇಷವಾಗಿ ಒಂದು ಹೆಂಗಳೆಯರ ತಂಡವನ್ನು ತಯಾರಿಸಿದ್ದರು. ಕಂಸಾಳೆ ನೃತ್ಯಕ್ಕೆ ದೇಹಧಾರ್ಡ್ಯತೆ ಬಹು ಮುಖ್ಯ. ಇದಕ್ಕಾಗೆ ಜಿಮ್ ಸೇರಿದ ಹೆಂಗಳೆಯರು ಭಾರ ಎತ್ತುವ ತರಬೇತಿಯನ್ನು ತಿಂಗಳು ಗಟ್ಟಲೆ ನಡೆಸಿದರು. ಒಬ್ಬರನ್ನೊಬ್ಬರು ಲೀಲಾ ಜಾಲವಾಗಿ ಎತ್ತುವುದಲ್ಲದೆ ಕಂಸಾಳೆ ಪದಗಳನ್ನು ಹಾಕಿ ಹೆಜ್ಜೆ ಇಟ್ಟರು. ಒಟ್ಟಿನಲ್ಲಿ ಹೈ ಎನರ್ಜೆಟಿಕ್ಪ ರ್ಫಾರ್ಮೆನ್ಸ್ಇದಾಗಿತ್ತು.

ನಂತರ ಬಂದಿದ್ದು ಕಳೆದ ೧೫ ವರ್ಷದಿಂದ ಕನ್ನಡ ಸಂಘದ ಕಾರ್ಯಕ್ರಮದಲ್ಲಿ ಭಾಗ್ವಿಸುತ್ತಿರುವ ಯುವ ತಂಡ. ಎಲ್. ಕೆ.ಜಿ. ಇಂದ ಹೈ ಸ್ಕೂಲ್ ವರೆಗೆ ಇವರ ಪಯಣ. ಅಂದು ಇಂದು ಎಂದೆಂದು ಮರೆಯದಂತ ಹಾಡುಗಳಿಗೆ ಹೆಜ್ಜೆ ಹಾಕಿದರು. ಕನ್ನಡ ಸಂಘದ ಹಲವಾರು ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಈ ಮಕ್ಕಳನ್ನು ಕಳೆದ ೧೫ ವರ್ಷದಿಂದ ಶ್ರೀಮತಿ ವೀಣಾ ವಡವಡಗಿ ತರಬೇತಿ ನೀಡುತ್ತಾ ಬಂದಿದ್ದಾರೆ. ರಿಧುನ್ ಹೊಸ ಹೊಸ ಹಾಡಿನಿಂದ ಕೂಡಿದ ಸುಂದರ ಮೆಡಲಿ ಪ್ರಸ್ತುತ ಪಡಿಸಿದವರು ಕವಿತಾ ರಾಮಣ್ಣ. ದೀಪಶ್ರೀ ಶರತ್ ಪ್ರಸ್ತುತ ಪಡಿಸಿದ ನವರಸ ಎಲ್ಲರ ಪ್ರಶಂಸೆಗೆ ಒಳಗಾಯಿತು. ಎಲ್ಲ ರಸಗಳನ್ನು ಹೊರ ಹೊಮ್ಮಿಸುವಲ್ಲಿ ಪೋಷಕರು ಯಶಸ್ವಿಯಾದರೆ, ಮಕ್ಕಳು ಅದಕ್ಕೆ ಹೊಂದುವ ಶೀರ್ಷಿಕೆಯನ್ನು ತಂದು ಪ್ರೇಕ್ಷಕರ ಮುಂದಿಟ್ಟರು. ವಿದ್ಯಾ ಆದ್ಯ ಅವರ ನೇತೃತ್ವದ ಶಿವ ಗಾನ, ಡಮರು ನಾದ ಹಾಗು ತಾಂಡವ ನೃತ್ಯವನ್ನು ಒಳಗೊಂಡಿತ್ತು. ಶಿವನ ವೇಷದಲ್ಲಿ ಶ್ರೀಮತಿ ವಿದ್ಯಾ ಆದ್ಯ ಅವರು ಕಂಗೊಳಿಸುತ್ತಿದ್ದರು. ವಿದ್ಯಾ ಜಗದೀಶ್ ಅವರ ಎಲ್ಲೆಲ್ಲು ಹಬ್ಬ ಹಬ್ಬ ಬಂತು ಯುಗಾದಿ ಹಬ್ಬ ಯುಗಾದಿ ಹಬ್ಬದ ಆಚರಣೆಗೆ ಸೂಕ್ತವಾದ ಆಯ್ಕೆ ಆಗಿತ್ತು. ಕಾರ್ಯಕ್ರಮದ ಅಂತ್ಯವು ಭಾರತದಿಂದ ಆಗಮಿಸಿದ ಭರತ್ ರಾಮ್ ಹಾಗು ತನ್ವಿ ರಾವ್ ಅವರ ನೃತ್ಯ ರೂಪಕ ಸಮರ್ಪಣೆಯೊಂದಿಗೆ ಮುಗಿಯಿತು. ಸಾಕಷ್ಟು ಜನಪ್ರಿಯವಾಗಿರುವ ಈ ಯುವ ಜೋಡಿ ಕನ್ನಡ ಸಂಘದ ಸದಸ್ಯರನ್ನು ತಮ್ಮ ಭಾವಪೂರ್ಣ ಅಭಿನಯದಿಂದ ರಂಜಿಸಿದರು. ಕಲೆಯ ತವರೂರಾದ ಮೈಸೂರಿನ ವಿದ್ಯಾ ದತ್ತ ಅವರ ನೇತೃತ್ವದ ಸಂಘ ಉತ್ತಮ ಗುಣಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿತು.


Leave a Reply